ನೈಸರ್ಗಿಕ ದಿನಚರ್ಯದ ಅಭಿಯಾನ

ಏನಿದು ನೈಸರ್ಗಿಕ ದಿನಚರ್ಯದ ಅಭಿಯಾನ?

ಇಂದಿನ ದಿನಮಾನದಲ್ಲಿ ಎಲ್ಲವೂ ಕೆಮಿಕಲ್ ಮಯವಾಗಿದೆ, ಅದರಲ್ಲೂ ಪ್ರತಿನಿತ್ಯ ನಮ್ಮ ಸ್ವಚ್ಛತೆಗಾಗಿ ನಾವು ಬಳಸುವ ಟೂತ್-ಪೆಸ್ಟ್,, ಸೋಪ್, ಶಾಂಪೂ ಇವುಗಳಲ್ಲಿ ಬಳಸುವ ಕೆಮಿಕಲ್ ಗಳು ಬೇರೆಲ್ಲ ಮೂಲಗಳಿಂದ ನಮ್ಮೊಳಗೆ ಸೇರುವ ಪ್ರಮಾಣಕ್ಕಿಂತ ಹೆಚ್ಚು ಮತ್ತು ಅಪಾಯಕಾರಿ. ಬ್ರಿಟಿಷರು ನಮ್ಮ ದೇಶದಲ್ಲಿ ಕೇವಲ ತಮ್ಮ ಲಾಭಕ್ಕಾಗಿ ಪರಿಚಯಿಸಿದಂತಹ, ಅತ್ಯಂತ ಕಡಿಮೆ ದರದಲ್ಲಿ ತಯಾರಿಸಲಾಗುವ – ಸಂಪೂರ್ಣವಾಗಿ ಕೆಮಿಕಲ್ ಗಳನ್ನೇ ಹೊತ್ತಿರುವ ಈ ಉತ್ಪನ್ನಗಳ ಹಾನಿಕಾರಕ ಪರಿಣಾಮಗಳನ್ನು, ವೈಜ್ಞಾನಿಕ ಅಧ್ಯಯನಗಳು ಬಯಲಿಗೆಳೆದಿವೆ. ಬ್ರಿಟಿಷರು ನಮ್ಮ ದೇಶದಲ್ಲಿ ಬಿಟ್ಟುಹೋದಂತಹ ಈ ಉತ್ಪನ್ನಗಳನ್ನ ಸ್ವತಃ ಅವರ ದೇಶಗಳಲ್ಲೇ ನಿರ್ಬಂಧಿಸಿದ್ದಾರೆ, ಇಂಗ್ಲೆಂಡ್, ಅಮೆರಿಕ, ಜಪಾನ್ ನಂತಹ ದೇಶಗಳು ಇಂತಹ ಹಲವು ಹಾನಿಕಾರಕ ಕೆಮಿಕಲ್ ಗಳನ್ನು ಸಂಪೂರ್ಣವಾಗಿ ನಿಷೇಧಿಸಿದ್ದಾರೆ.

ಆದರೆ ಅಭಿವೃದ್ಧಿ ಹೊಂದದ ಅಥವಾ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ, ಆರೋಗ್ಯದ ಕಡೆಗಿನ ಗಮನಕ್ಕಿಂತ, ಕಡಿಮೆ ದರದಲ್ಲಿ ಉತ್ಪನ್ನಗಳನ್ನು ಪೂರೈಸುವುದು ಅನಿವಾರ್ಯವಾಗಿರುವುದರಿಂದ, ಹಾಗೂ ನಮ್ಮ ಬಹುತೇಕ FMCG ಮಾರುಕಟ್ಟೆಗಳ ಉದ್ದೇಶ ಕೇವಲ ಲಾಭಗಳಿಸುವುದೇ ಆಗಿರುವುದರಿಂದ, ನಾವಿನ್ನೂ ಇಂತಹ ಹಾನಿಕಾರಕ ಟೂತ್-ಪೇಸ್ಟ್, ಸೋಪು, ಶಾಂಪೂಗಳನ್ನು ಪ್ರತಿನಿತ್ಯ ಬಳಸುತ್ತಿದ್ದೇವೆ. ಅಷ್ಟೇ ಅಲ್ಲದೆ ಏನೂ ಅರಿಯದ ಚಿಕ್ಕ ಮಕ್ಕಳಿಗೂ ಕೂಡ ಇಂತಹ ಉತ್ಪನ್ನಗಳನ್ನು ಒತ್ತಾಯಪೂರ್ವಕವಾಗಿ ಬಳಸುವಂತೆ ಮಾಡುತ್ತಿರುವುದು ನಿಜವಾಗಿಯೂ ಒಂದು ವಿಷಾದನೀಯವಾದ ಸಂಗತಿಯಾಗಿದೆ…

ನಮ್ಮ ದೇಶದಲ್ಲಿ ಹಿಂದಿನವರು ನೈಸರ್ಗಿಕ ಉತ್ಪನ್ನಗಳನ್ನೆ ಬಳಸುತ್ತಿದ್ದರು, ಆರೋಗ್ಯದಿಂದ ಇದ್ದರು. ಆದರೆ “ಮಾಡರ್ನ್” ಎಂಬ ಹೆಸರಿನಲ್ಲಿ, ಕಮರ್ಷಿಯಲ್ ಬಹುರಾಷ್ಟ್ರೀಯ ಕಂಪನಿಗಳ ವ್ಯಾಪಾರದ ವ್ಯೂಹದಲ್ಲಿ ಸಿಕ್ಕಿ, ನಮ್ಮ ಮೂಲವನ್ನ ಮರೆತಿದ್ದೇವೆ, ನಮ್ಮಲ್ಲಿರುವ ನೈಸರ್ಗಿಕ ಉತ್ಪನ್ನಗಳ ಅದ್ಭುತ ಪ್ರಯೋಜನಗಳು ನಮಗೆ ತಿಳಿದಿದ್ದರೂ – ಈ ಗಂಭೀರವಾದ ವಿಚಾರವನ್ನು ಕಡೆಗಣಿಸಿದ್ದೇವೆ, ಊರಂತೆ – ಯಾರಂತೆ – ಎಲ್ಲರಂತೆ ನಾವೂ ಬದುಕಿದರಾಯಿತು ಎಂಬ ವಿಚಾರಶೂನ್ಯ ಪರಿಸ್ಥಿತಿಯಲ್ಲಿ ಕೆಲವರು ಇದ್ದರೆ, ಇನ್ನು ಕೆಲವರಿಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸ್ವಲ್ಪವೂ ಸಮಯವೇ ಇಲ್ಲದಂತಾಗಿದೆ.

ಎಲ್ಲವೂ ಕೆಮಿಕಲ್ ಮಯವಾಗಿರುವ ಇಂದಿನ ದಿನದಲ್ಲಿ, ನಮ್ಮ ಕುಟುಂಬಕ್ಕಾಗಿ, ನಮ್ಮ ಮಕ್ಕಳಿಗಾಗಿ ನಾವು ಎಚ್ಚೆತ್ತುಕೊಳ್ಳುವ ಅನಿವಾರ್ಯತೆ ಸಮೀಪಿಸಿದೆ. ಒಂದು ಒಳ್ಳೆಯ ಜೀವನಕ್ರಮವನ್ನು ನಮಗೆ ಹಾಗೂ ನಮ್ಮ ಮಕ್ಕಳಿಗೆ ಪರಿಚಯಿಸುವ ಆಂದೋಲನವೇ ಈ ನೈಸರ್ಗಿಕ ದಿನಚರ್ಯ ಅಭಿಯಾನ.

ನೈಸರ್ಗಿಕ ಪ್ರಾಡಕ್ಟ್‌ಗಳು ಎಂಬ ಹಣೆಪಟ್ಟಿಯಲ್ಲಿ ಮತ್ತದೇ ಕೆಮಿಕಲ್ ಗಳು, ಹಾನಿಕಾರಕ ಪ್ರಿಸರ್ವೇಟಿವ್‌ಗಳು:

ನಿಮ್ಮ ಪೇಸ್ಟ್‌ನಲ್ಲಿ ಉಪ್ಪು ಇದೆಯೇ? ಚಾರ್ಕೋಲ್ ಇದೆಯೇ ಎಂದು ಕೇಳುವವರು ಒಂದೆಡೆಯಾದರೆ, ಆಯುರ್ವೇದದ ಹೆಸರುಗಳನ್ನು ಹೊತ್ತು, ಬೆರಳೆಣಿಕೆಯ ನೈಸರ್ಗಿಕ ಉತ್ಪನ್ನಗಳನ್ನು ಬಳಸಿ ಮತ್ತದೇ ಕೆಮಿಕಲ್ ಉತ್ಪನ್ನಗಳ ಮಾರಾಟದ ಭರಾಟೆ ಕೂಡ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ, ಆ ಪ್ರಾಡಕ್ಟ್‌ಗಳ ಹಿಂಬದಿಯಲ್ಲಿ ಅತಿ ಸಣ್ಣ ಅಕ್ಷರಗಳಲ್ಲಿ ಬರೆದಿರುವ Ingredients List ನೋಡಿದಾಗ ಮಾತ್ರ ಅವುಗಳ ಅಸಲಿಯತ್ತು ತಿಳಿಯುತ್ತದೆ.

ರೈತರಿಂದ ಜನರಿಗೆ – ಮರಳಿ ಪರಿಸರದೆಡೆಗೆ

ನಮ್ಮ ದೇಶದ ರೈತರು ನೈಸರ್ಗಿಕವಾಗಿ ಬೆಳೆಯುವ ವಿಶೇಷವಾದ ಉತ್ಪನ್ನಗಳನ್ನು ಬಳಸಿ, ಪ್ರತಿಯೊಬ್ಬರಿಗೂ ಉತ್ತಮ ಗುಣಮಟ್ಟದ, ನೈಸರ್ಗಿಕ ಉತ್ಪನ್ನಗಳು ಕೈಗೆಟಕುವ ಬೆಲೆಯಲ್ಲಿ ಎಲ್ಲರಿಗೂ ಸಿಗುವಂತೆ ಮಾಡುವುದು, ದೈನಂದಿನ ಅಗತ್ಯಗಳಾದ – ಕೆಮಿಕಲ್ ಸೋಪು, ಶಾಂಪೂ, ಪೇಸ್ಟ್ ಗಳ ಬದಲಾಗಿ ಅವುಗಳಿಗಿಂತಲೂ ಪ್ರಭಾವಶಾಲಿಯಾದ, ಆರೋಗ್ಯಕರವಾದ ಪರ್ಯಾಯಗಳನ್ನು ತಿಳಿಸುವುದು, ಮನೆಯಲ್ಲಿಯೇ ತಯಾರಿಸುವ ವಿಧಾನಗಳ ಮಾಹಿತಿ ಒದಗಿಸುವುದು, ಈ ಆಂದೋಲನದ ಹಾಗೂ ಸ್ವಯಂಕಲ್ಪ ಸಂಸ್ಥೆಯ ಉದ್ದೇಶವಾಗಿದೆ.

ಈ ಆಂದೋಲನದಲ್ಲಿ ಭಾಗಿಯಾಗುವುದು ಹೇಗೆ?

  • ನಮ್ಮ ದಿನಚರಿಯಲ್ಲಿ ನೇರವಾಗಿ, ನಮಗೆ ಅರಿವಿದ್ದರೂ ಕೂಡ ನಾವು ಬಳಸುವ ಕೆಮಿಕಲ್ ಉತ್ಪನ್ನಗಳನ್ನು ಪಟ್ಟಿ ಮಾಡುವುದು
  • ಆ ಪಟ್ಟಿಯಲ್ಲಿರುವ ಪ್ರಾಡಕ್ಟ್‌ಗಳಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಮನೆಯಲ್ಲಿಯೇ ತಯಾರಿಸಿಕೊಳ್ಳಲು ಪ್ರಯತ್ನಿಸುವುದು.
  • ಮನೆಯಲ್ಲಿ ತಯಾರಿಸಲು ಸಾಧ್ಯವಾಗದಂತಹ ಸಮಯದ ಅಭಾವ ಇದ್ದರೆ, ಅಥವಾ ಗುಣಮಟ್ಟದ ನೈಸರ್ಗಿಕ Ingredients ದೊರಕದೆ ಇದ್ದರೆ – ನಿಜವಾಗಿಯೂ ನೈಸರ್ಗಿಕ ಉತ್ಪನ್ನಗಳು ಯಾವುದು ಎಂದು ಅವುಗಳ ingredients list ಪರಿಶೀಲಿಸಿ ಖಚಿತಪಡಿಸಿಕೊಳ್ಳುವುದು.
  • ನಾವೂ ನೈಸರ್ಗಿಕ ಉತ್ಪನ್ನಗಳನ್ನೇ ಬಳಸುವುದು – ಹಾಗೂ ನಮ್ಮವರಿಗೆ, ನಮ್ಮ ಮಕ್ಕಳಿಗೆ, ಕುಟುಂಬದವರೊಂದಿಗೆ ಈ ವಿಚಾರವನ್ನು ಹಂಚಿಕೊಳ್ಳುವುದು.

ನಮ್ಮ ಒಂದು ಸರಳವಾದ ಪ್ರಜ್ಞಾಪೂರ್ವಕವಾದ ಹೆಜ್ಜೆ ನಮ್ಮ ಜೀವನವನ್ನು, ನಮಗರಿವಿಲ್ಲದಂತೆ ನಮ್ಮ ಆರೋಗ್ಯಕ್ಕೆ ಆಗುತ್ತಿರುವ ಹಾನಿಯನ್ನು ತಪ್ಪಿಸುವುದಲ್ಲದೇ, ಸಂಪೂರ್ಣ ಆರೋಗ್ಯವನ್ನೂ ವೃದ್ಧಿಸುತ್ತದೆ.


Comments

Leave a Reply

Your email address will not be published. Required fields are marked *